ಆಭಾಸವನು ಸತ್ಯವೆಂದು ಬೆಮಿಸುವುದುಮ್ ||
ಸೌಭಾಗ್ಯಗಳನರಸಿ ದೌರ್ಭಾಗ್ಯಕೀಡಹುದುಮ್ |
ಅಭಿಶಾಪ ನರಕುಲಕೆ - ಮಂಕುತಿಮ್ಮ ||
ಇದನ್ನೆಲ್ಲಾ ಕೇಳಿದಾಗ ಈ ನನ್ನ ಭಾವನೆಗಳನ್ನು ನನ್ನ ಈ ಚಿತ್ರದಲ್ಲಿ ಮೂಡಿಸಿದೆ..ಹಾಗೆ ಮನನ ಮಾಡುತ್ತಿದ್ದಾಗ ಬಂದ ಪದಗುಚ್ಚಗಳು ಹೀಗೆ:
ಬೇಕು ಬೇಕುಗಳೇ ಸುಳಿದಿಹ ಜಾತ್ರೆಯಲಿ,
ಸಾಕೆನಲೊಲ್ಲದೀ ಜೇವ.
ಒಂಟಿಯಾಯಿತೊಮ್ಮೆ ಬಾಳ ನೌಕೆಯಲಿ,
ಹೊರಟಿತೆತ್ತಲೋ ಹಂಚದದಾವ ಸುಖವ!!
ಹುಟ್ಟಿದಾಗಿನಿಂದ ಅದು ಬೇಕು ಇದು ಬೇಕು ಎನ್ನುವ ಈ ಮನಸ್ಸು ಎಂದೂ 'ಸಾಕು' ಎನ್ನಲು ಬಯಸದು. ಸ್ವಾಭಾವಿಕವಾಗಿ ಸಿಕ್ಕಿದೆಲ್ಲಕ್ಕಿಂಥ ಆಕಾಶಕ್ಕೆ ಏಣಿ ಇಡಲು ಹೊರಡುವ ನಾವು, ಕತ್ತಲಲ್ಲಿ ಕಂಡ ಹಗ್ಗವನ್ನು ಹಾವೆಂದು ಭ್ರಮಿಸಿ ಅದನ್ನೇ ಸತ್ಯವೆಂದು ಅರಿಯುತ್ತೇವೆ. ಜೀವನದುದ್ದಕ್ಕೂಸೌಭಾಗ್ಯವ ಹುಡುಕುತ್ತಾ ಸರಿಯಾದ ಮಾರ್ಗವನ್ನು ಅರಿಯದೆ ದೌರ್ಭಾಗ್ಯವನ್ನು ಪಡೆಯುತ್ತೇವೆ. ಕೊನೆಯಲ್ಲಿ ಒಂಟಿ ಬಾಳು ಸವೆಸುವ ಸಮಯ ಒದಗಿದಾಗ ಇಲ್ಲಿಯವರೆಗೆ ಬೇಕು ಬೇಕೆಂದು ಪಡೆದ ಯಾವೊಂದನ್ನೂ ತನ್ನವರೊಂದಿಗೆ ಹಂಚಲಾಗದೆ (ತಾನೆ ಸುಖ ಪಡದೆ) ಜೀವನದ ಕೊನೆಯ ಪಯಣ ಬೆಳೆಸುತ್ತೇವೆ.
ಮಂಕುತಿಮ್ಮನ ಕಗ್ಗ, ಇದನ್ನು ಓದುವಾಗ ಮನಸ್ಸಿಗೆ ಬರುವ ಒಂದೇ ಒಂದು ಆಲೋಚನೆ, ಪ್ರತಿಯೊಂದು ಪದವನ್ನು ಅರ್ಥಗರ್ಭಿತವಾಗಿ ಹೊಂದಿಸಿರುವ ಡಿ.ವಿ.ಜಿ. ಯವರ ಅನುಭವದ ಮಾತುಗಳೇ ಇವು ಅಥವಾ ಎಲ್ಲವನ್ನು ಅರಿತುದಾದರೋ ಹೇಗೆ ಎಂದು. ಇದನ್ನೆಲ್ಲ ನಿಜವಾಗಿ ಓದಬೇಕಾಗಿರುವುದು ನಮ್ಮ ಪ್ರೌಢಾವಸ್ಥೆಯಲ್ಲಿ. ಏಕೆಂದರೆ ಪ್ರೌಢಾವಸ್ಥೆ ಒಂದು ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯವುಳ್ಳ ಘಟ್ಟ ಹಾಗೂ ಅವಸ್ಥೆ. ಇದನ್ನು ನಾವು ಸರಿಯಾಗಿ ನಿಭಾಯಿಸಲು ಡಿ.ವಿ.ಜಿ.ಯವರಂಥ ಅನೇಕ ಮಹಾನ್ ವ್ಯಕ್ತಿಗಳ ಅನುಭವಕ್ಕೆ ಹತ್ತಿರಕ್ಕೆ ಕರೆದೊಯ್ಯುವ ಸೂತ್ರಗಳು ಅತ್ಯಂತ ಮುಖ್ಯ. ಆದರೆ ನಾವು ಅಥವಾ ಈಗಿನ ಆಧುನಿಕ ಬದುಕಿಗೆ ಹೊಂದಿಕೊಂಡು ನಮ್ಮ ಸಂಸ್ಕೃತಿ, ಕಾವ್ಯವನ್ನು ಮರೆತು ಸಾಗುತ್ತಿರುವ ಈ ಯುವ ಪೇಳಿಗೆಗೆ ಇಂಥಹ ಪುಸ್ತಕಗಳು ಬಹು ದೂರ. ಇಂದು ಪ್ರೌಢಾವಸ್ಥೆಯಲ್ಲಿ ಇದನ್ನೆಲ್ಲಾ ಓದಿ ತಿಳಿಯದೆ ನಮಗೆ ಚಾಲೀಸು ಹತ್ತಿದಾಗ ಪುಸ್ತಕವನ್ನು ಹಿಡಿಯಲು ಶಕ್ತಿ ಇಲ್ಲದ ಕೈಯಲ್ಲಿ ದೂರ ಹಿಡಿದು, ಓದಿದ್ದನ್ನು ಮತ್ತೊಬ್ಬರಿಗೆ ಹೇಳಿ ಹಂಚಿ ಆನಂದ ಪಡಲು ಯಾರೂ ಹತ್ತಿರ ಇರದಿರಲು, ಓದಿ ಫಲವೇನು? ಇನ್ನೊಂದು ಹತ್ತೋ, ಇಪ್ಪತ್ತೋ ಆಯುಷ್ಯ ಉಳಿದಿರಲು ನಾವು ಓದುವ ಪುಸ್ತಕ ಇದು ಎಂಬುದು ತಪ್ಪು ಕಲ್ಪನೆ.
ಇದನ್ನೇ ಓದಬೇಕಾದ ಸಮಯದಲ್ಲಿ ಓದಿ, ಬಾಳ ಬೇಕಾದ ವಯಸ್ಸಿನಲ್ಲಿ ಅರಿತು ಬಾಳಿದರೆ ಎಷ್ಟೊಂದು ಕಥೆಗಳು ಇಂತಹ ದಿನನಿತ್ಯದ ಧಾರಾವಾಹಿಗಳಾಗಿ ಹುಟ್ಟುತ್ತಿರಲಿಲ್ಲ. ಈ ಕಥೆಗಳಲ್ಲಿ ನಾವೆಲ್ಲಾ ಒಂದಲ್ಲ ಒಂದು ಸಲ ನಮ್ಮ ಪಾತ್ರಗಳನ್ನು ಗಮನಿಸಿದ್ದೇವೆ. ಒಪ್ಪಿಕೊಂಡು ತಿದ್ದಿಕೊಳ್ಳುವ ಧೈರ್ಯ ಬೇಕು ಅಷ್ಟೆ. ಹೀಗೆ ಒಂದು ಕಪ್ಪು ಚುಕ್ಕೆಯಿರುವ ಜೀವನವನ್ನು ತಿದ್ದಲು, ನಾವು ಇವೆಲ್ಲವನ್ನೂ ಓದಿ ಅರಿತು ತಿದ್ದಿಕೊಳ್ಳುವ ವೇಳೆಗಾಗಲೆ ಯಮನ ಬಾಗಿಲು ನಮಗೋಸ್ಕರ ತೆರೆಯುತ್ತಿರುವುದು ಕಾಣುವುದು. ಆಗ ಸಮಯವೆಲ್ಲಾ ವ್ಯರ್ಥ ಮಾಡಿದೆನಲ್ಲಾ, ಇನ್ನೂ ಬದುಕಿ ನಾ ಸಾಧಿಸುವೆ ಎಂಬ ಹುಮ್ಮಸ್ಸು ಬಂದರೂ ಕಾಲವನ್ನು ತಡೆಯಲಾಗದು.
ಈ ನುಡಿ ಸತ್ಯವಾದರೂ, ಅದನ್ನು ಓದುತ್ತಿರುವ ನಾವು ಎಷ್ಟರ ಮಟ್ಟಿಗೆ ಪಾಲಿಸುತ್ತೇವೆ ಎನ್ನುವುದು ಮುಖ್ಯ. ಕಾಲದ ಸದುಪಯೋಗ ಪಡೆದುಕೊಂಡು ನಮ್ಮ ಹುಟ್ಟಿನ ಉದ್ದೇಶವನ್ನು ಪ್ರತಿಯೊಬ್ಬರೂ ಇಳಿವಯಸ್ಸಿನಲ್ಲಿಯೇ ಅರಿತು ಬಾಳಿದರೆ ನಮ್ಮ ಸುತ್ತಲ ಪರಿಸರ ನಮ್ಮ ಮನಃಸ್ಥಿಥಿಯ ಬಗ್ಗೆ ಒಮ್ಮೆ ಊಹಿಸಿ ....ಒಳ್ಳೆಯ ಚಿತ್ರ ಕಂಡರೆ ಇದೇ ವಿಷಯದ ಮನನದಲ್ಲಿ ಏನಾದರೊಂದು ಬದಲಾವಣೆ ಗುರುತಿಸಿ, ಮುಂದಿನ ನನ್ನ ಹೊಸ ವಿಷಯವನ್ನು ನೋಡಲು ಮತ್ತೆ ಈ ಬ್ಲಾಗ್ ಗೆ ಕ್ಲಿಕ್ಕಿಸುತ್ತೀರ ತಾನೇ..??
11 comments:
ಬರಹ ಚಿಕ್ಕದಾದರೂ ಚೊಕ್ಕದಾಗಿ ಮೂಡಿಬಂದಿದೆ. ಡಿ.ವಿ.ಜಿ ಯವರ ತತ್ವದ ಬಗ್ಗೆ ಬಹಳ ಅರ್ಥವತ್ತಾಗಿ ಚಿತ್ರಿಸಿದ್ದೀರ !
ಯುವಪೀಳಿಗೆಯ ಬಗ್ಗೆ ಇರುವ ನಿಮ್ಮ ಕಾಳಜಿಯನ್ನು ಸೂಕ್ತವಾಗಿ ವ್ಯಕ್ತಪಡಿಸಿದ್ದೀರ ! ನಿಮ್ಮಿಂದ ಇನ್ನಷ್ಟು ಈ ರೀತಿಯ ಬರಹಗಳು ಹೊರಹೊಮ್ಮಲಿ ಹಾಗೂ ಅವುಗಳು ಸಮಾಜವನ್ನು ತಲುಪಲಿ, ನಮ್ಮ ಯುವಪೀಳಿಗೆಯನ್ನು ಉನ್ನತ ದಾರಿಯಲ್ಲಿ ಕೊಂಡೋಯ್ಯಲಿ ಎಂದು ಆಶಿಸುವೆ.
- Arvi
hey what a surprise.........
i can read kannada but........
i can understand a little bit
keep posting...........
ಬ್ಲಾಗ್ ನ ವಿಸ್ಮಯ ಪ್ರಪಂಚಕ್ಕೆ ಸುಸ್ವಾಗತ! :o)
"...ಇಂದು ಪ್ರೌಢಾವಸ್ಥೆಯಲ್ಲಿ ಇದನ್ನೆಲ್ಲಾ ಓದಿ ತಿಳಿಯದೆ ನಮಗೆ ಚಾಲೀಸು ಹತ್ತಿದಾಗ ಪುಸ್ತಕವನ್ನು ಹಿಡಿಯಲು ಶಕ್ತಿ ಇಲ್ಲದ ಕೈಯಲ್ಲಿ ದೂರ ಹಿಡಿದು, ಓದಿದ್ದನ್ನು ಮತ್ತೊಬ್ಬರಿಗೆ ಹೇಳಿ ಹಂಚಿ ಆನಂದ ಪಡಲು ಯಾರೂ ಹತ್ತಿರ ಇರದಿರಲು, ಓದಿ ಫಲವೇನು?.." - ಎಷ್ಟು ಸತ್ಯ! ನಮ್ಮ thinking ಅದೇ ಥರ!! ಈ ವಯಸ್ಗೆ ಹೀಗೆ ಇರಬೇಕು ಅಂತ ಇರ್ತೀವಿ. ಬೇಕು ಬೇಕು ಅಂತ ಜೀವನ ಪೂರ್ತಿ ಸುಸ್ತಾಗಿ ಕಡೆಗೆ ವೇದಾಂತ, 'ಜೀವನ ಅಂದ್ರೆ ಏನು' ಅಂತ ಯೋಚನೆ ಮಾಡ್ತೀವಿ :(
Well written!
ಬೇಕು ಬೇಕುಗಳ ಜಾತ್ರೆಯಲಿ ಈ ಬ್ಲಾಗ್ ಗೆ ಬೇಡ ಬ್ರೇಕು - ಸಿಗಲಿ ಬಹಳ ಕ್ಲಿಕ್ಕು
-C
Hey I cant read so much kannada.. if possible post the meaning in english also so that people like us can read.. anyways good..
Thanks everybody...for all your comments...!
Will try to post some in English.
But I started this blog to share my thought with my paintings, which I can express fluently in my favorite language Kannada :)!!!
What a surprise!!! Very good start. Expected this from you from a long ago. But nothing is late. Awesome painting. Nice kick start with the column.
Keep rocking with your paintings and kavithes in both kannada and hindi too. I know u can write poems in hindi..
Keep blogging.
ee nimma barahagaLu heegeye nimma lekhani inda haridu barutthirali endu naa haaraisuve.
Summis
Better late than never. Welcome to the world of blogger. Its a good start, I say. Looking forward to see more writings and paintings. Regarding your blog, I must say its an unique attempt. You are creative, I am sure you will do more experiments. All the best summis
maathigu kruthigu irali nantu
aaga badukigu baligu artha oontu.
ANIMUTTUALU NOORARU
NUDIMTTUGALU SAAVIRARU
IDANNA ALAVADISIDARE NANNA SARISAMANYARU
AVAGANISIDARE NANNA OOLYSUVARYARYRU
Two creative forms of expressions ... Art and Writing ... Your Art speaks for itself, but you add your writing to it and make it just that little bit more eloquent ... I have to say "Thank you."
Post a Comment