ನವದಂಪತಿಗಳಿಗೆ ಎಲ್ಲಿ ನೋಡಿದರೂ ಸಿಹಿ ತಿಂಡಿಗಳು. ಚಿಕ್ಕ ಮಕ್ಕಳಿಗೆ ಮತಾಪುಗಳು, ಸುರು ಸುರು ಬತ್ತಿಗಳು, ಕಿರುಚಿ ಅಳುತ್ತಿರುವ ಮಕ್ಕಳನ್ನು ಎತ್ತಿಕೊಂಡು ಪಟಾಕಿ ಹತ್ತಿಸುತ್ತಿರುವ ಅಪ್ಪ, ಚಿಕ್ಕಪ್ಪ ಅಥವಾ ಮಾವ. ಮಾರು ದೂರದಿಂದ ಪಟಾಕಿ ಹೊಡಯಲೇಬೇಕು ಎನ್ನುವ ಪ್ರಯತ್ನದಲ್ಲಿ ನಿರಂತರವಾಗಿ ತೊಡಗಿರುವ ಹೆಂಗಸರು. ನಮ್ಮ ದೂರದರ್ಶನದ ನಿರೀಕ್ಷಿಸಿದ ಕಾಯಕ್ರಮಗಳು...
ಯಾರಿಗೂ ತೊಂದರೆ ಕೊಡದೆ ನನ್ನಷ್ಟಿಗೆ ಬದುಕಿ ಸಾಯುತ್ತೇನೆನ್ನುವ ಹಲವಾರು ಮಾನವರು ಅವರೊಂದು ಮೃಗಕ್ಕೆ ಸಮಾನರೆಂದು ಅರಿಯರು. ನಮ್ಮ ಹುಟ್ಟಿಗೊಂದು ಮಹತ್ವವಿದೆಯೆಂದು ಆದಷ್ಟು ಬೇಗ ಅರಿತು, ’ಲೈಫು ಇಷ್ಟೇ’ ಆದರೂ ಅದರ ಸಂಪುರ್ಣ ಸಾರವನ್ನು ಅರಿಯಬೇಕೆನಿಸುತ್ತದೆ. ಈ ದೀಪಾವಳಿಯ ದೀಪದೊಳಗಿನ ಆ ಬತ್ತಿಯಂತೆ, ತನ್ನನ್ನೇ ಉರಿಸಿ ಸುತ್ತಲೆಲ್ಲರಿಗೂ ಸಂತೋಷವನ್ನಿತ್ತಂತೆ, ನಾವೂ ಕೈಲಾದಷ್ಟು ಬೇರೆಯವರ ಸಂತೋಷಕ್ಕಾಗಿ ನಮ್ಮ ಜೀವನವನ್ನು ಮುಡುಪಾಗಿಡಬಹುದಲ್ಲವೇ? ಇದಕ್ಕೆ ದೊಡ್ಡ ದೊಡ್ಡ ಸಮಾಜ ಸೇವೆಗಳಾಗಲೀ, ಹೆಚ್ಚಿನ ಆರ್ಥಿಕ ಸಹಾಯವಾಗಲೀ ಬೇಕಿಲ್ಲ, ನಮ್ಮ ಸುತ್ತಲಿನ ಜನರೊಂದಿಗೆ ಆದಷ್ಟು ಸಂತೋಷದ ಮಾತುಗಳಿಂದ ನಮಗೆಷ್ಟೇ ಸಂಕಟಗಳಿದ್ದರೂ, ಪರಚಿ ಪರಚಿ ಗಾಯವನ್ನು ಹುಣ್ಣಾಗಿಸುವ ಮಂಗನಂತಾಗದೆ, ದೀಪದ ಬತ್ತಿಯಂತಾಗಬಹುದೆನಿಸುತ್ತದೆ. ಒಮ್ಮೆ ಪ್ರಯತ್ನಿಸಿ ನೋಡಿ..ಯಾಕೆಂದರೆ ನನ್ನ ಅನುಭವದಂತೆ ಇದೊಂದು ಸುಂದರ ಪರಿಣಾಮವನ್ನಿತ್ತಿದೆ. ಒಮ್ಮೊಮ್ಮೆ ಮನಸ್ಸು ಮುದುಡಿ ಮೂಲೆ ಸೇರಿ ಅಳುವುದೇನೋ ಎನ್ನುವ ಸಮಯದಲ್ಲಿ ಅದನ್ನೆಲ್ಲಾ ಪಕ್ಕಕ್ಕೆ ಇಟ್ಟು ಒಳ್ಳೆಯ ಕಾರ್ಯದ ಬಗ್ಗೆ ಯೋಚಿಸಲು ಪ್ರಾರಂಭ ಮಾಡುವುದೇ ಮನಸ್ಸು ಹುರುಪಿನಿಂದ ನಲಿಯುವಂತೆ ಮಾಡುತ್ತದೆ...ಕತ್ತಲೆಯಿಂದ ಬೆಳಕಿನೆಡೆಗೆ ಹೋಗಲು ನಾವೇ ಹುಡುಕಿಕೊಳ್ಳಬಹುದಾದ ದಾರಿ, ನಮ್ಮ ಹಳೆಯ ಕೆಟ್ಟ ಆಗುಹೋಗುಗಳನ್ನು, ನಮ್ಮೊಳಗೇ ಅಡಗಿರುವ ಕೆಟ್ಟ ವ್ಯಕ್ತಿತ್ವವನ್ನು ಉರಿಸಿ ನಮ್ಮ ಮುಂದಿರುವ ಒಳ್ಳೆಯ ದಾರಿಗೆ ನಾವೇ ದೀಪವಾಗುವುದು...
3 comments:
Good One Madam, You are right. we should lit the inner light rather lighting the candle & burning the crackers.
Keep the lighting work get going :)
-Arvind
ಸುಮನ, ಉತ್ತಮ ಚಿಂತನೆ!
ನನ್ನದೊಂದು ವಿಭಿನ್ನ ಅನಿಸಿಕೆ ವ್ಯಕ್ತಪಡಿಸಲು ಆಸ್ಪದ ಇದೆ ಎಂದುಕೊಂಡಿದ್ದೇನೆ. ಇತರರ ಸಂತೋಷವನ್ನು ತಮ್ಮ ಸಂತೋಷವೆಂಬಂತೆ ಅನುಭವಿಸುವಷ್ಟು ಪ್ರಬುದ್ಧತೆ ಎಲ್ಲರಿಗೂ ಇರುತ್ತದೆಯೋ ತಿಳಿದಿಲ್ಲ (ನನಗಂತೂ ಇಲ್ಲ). ಇತರರಿಗೆ ದುಃಖ ಆಗದ ರೀತಿಯಲ್ಲಿ ಬದುಕುವುದು ಜೀವನದ ಗುರಿಯಾಗಬೇಕೆ ವಿನಃ ಇತರರ ಸಂತೋಷಕ್ಕಾಗಿಯೇ ಬದುಕುವುದು ಜೀವನವಲ್ಲ. ಒಂದು ಹಂತದವರೆಗೂ 'ಸ್ವಾರ್ಥ' ಇದ್ದರೆ ಒಳಿತು, ಆದರೆ ಆ 'ಸ್ವಾರ್ಥ' ಇನ್ನಿತರರಿಗೆ ಮುಳುವಾಗಬಾರದಷ್ಟೇ.
Thanks Aravind...
ಧನ್ಯವಾದ ಪ್ರಶಾಂತ್,...ನಿಮ್ಮ ಅನಿಸಿಕೆ ಚೆನ್ನಾಗಿದೆ.
ಬೇರೆಯವರ ಸಂತೋಷಕ್ಕಾಗಿ ಯಾರೂ ಬದುಕಬೇಕಿಲ್ಲ, ಆದರೆ ನಮಗೆಷ್ಟೇ ಸಂಕಟಗಳಿದ್ದ,ರೂ ಅದರಿಂದ ನಮ್ಮ ಜೀವನದ ಧ್ಯೇಯವನ್ನು ಮರೆತು ನಮ್ಮೊಳಗೇ ಸಂಕಟ ಪಡುವ ಬದಲು, ಈ ಶರೀರ ಹಾಗು ಮನಸ್ಸನ್ನು ಬೇರೆಯವರ ಅಥವಾ ಒಳ್ಳೆಯ ಕಾರ್ಯಗಳಿಗೆ ಮುಡುಪಾಗಿಡಬಹುದು. ನಿಜ,ಒಳ್ಳೆಯ ಕೆಲಸವಾದರೆ ಸ್ವಾರ್ಥವೂ ಒಳ್ಳೆಯದೇ :)
Post a Comment