Today's Quote...

"Brightness is sun's nature, coolness is
water's nature, heat fire's nature. Similarly the
nature of Atma is Sath (Absolute Existence),
Chith (Absolute Knowledge) Ananda
(Absolute Bliss), Permanence and Purity." - Atmabodha, Aadi Sankaracharya.

Thursday, July 14, 2011

ಒಮ್ಮೆ ಆಲೋಚನೆಗೆ ಬಂದಿದ್ದು...



ಪ್ರತಿದಿನ ನಾವು ಈ ಬಂಡವಾಳವಿಲ್ಲದ ಜೀವನದ ವ್ಯಾಪಾರ ಪ್ರಾರಂಭಿಸಿದಾಗ, ಈ ದಿನ ಹೇಗೆ ಕಳೆಯುವುದೋ ಎಂದು ಒಮ್ಮೆಯೂ ಆಲೋಚಿಸಲು ಸಮಯವಿಲ್ಲದಂತಾಗುತ್ತದೆ. ಸಂಜೆ ಸುಂದರವಾಗಿರುತ್ತದೆ. ಸುತ್ತಲಿರುವ ಪ್ರಪಂಚವೆಲ್ಲಾ ನಮ್ಮೊಟ್ಟಿಗೆ ಓಡುವಾಗ ಎಲ್ಲಾ ನಮ್ಮವರಾಗಿಯೇ ಕಾಣುತ್ತಾರೆ. ಒಂಟಿಯಾಗಿ, ಎಂದು ತನ್ನ ಬಗ್ಗೆ ಯೋಚಿಸಲು ಸಮಯ ಸಿಗುತ್ತದೋ ಎಂದೆನಿಸುತ್ತದೆ. ಆದರೆ ಸುತ್ತಲಿನ ಬಂಧುಗಳ,ಸ್ನೇಹಿತರ ಹಾಗೂ ಪ್ರತಿ ಕ್ಷಣ ತಲೆಯಲ್ಲಿ ಗುಂಯ್ ಗುಟ್ಟುವ ನಮ್ಮ ಕರ್ತವ್ಯಗಳ ಆಲೋಚನೆಗಳಿಂದ ಸಮಯ ಓಡುತ್ತದೆ. ಅದೊಂದು ಯಾಂತ್ರಿಕ ಬದುಕೆನ್ನಿಸುತ್ತದೆ.

ಒಮ್ಮೆ ಆಲೋಚಿಸಿ ನೋಡೋಣ... ಸ್ಕೂಲಿನಲ್ಲಿ, ಓದಿ ಮುಂದೆ ಬರುವುದೊಂದೇ ಗುರಿ, ಯಾಕೆಂದರೆ ಆಗ ಅರಿವಾಗಿದ್ದು ಅಷ್ಟೆ. ಎಲ್ಲರಂತೆ ತಾನೂ ಯಾವುದಾದರೊಂದು ಕೆಲಸಕ್ಕೆ ಸೇರಿ ಇಷ್ಟ ಬಂದದ್ದೆಲ್ಲಾ ಖರೀದಿಸುವೆ ಎಂಬ ತವಕದಲ್ಲಿ ಇದರಿಂದ ಏನು ಪ್ರಯೋಜನ ಎಂದು ಅರಿಯದವರಾಗುತ್ತೇವೆ. ಬದುಕು ಅರ್ಥವಾಗಬೇಕೆಂದು ಮದುವೆ, ಮಕ್ಕಳು. ನನ್ನ ಮಕ್ಕಳಿಗೆ ನಾನೇ ದಿಕ್ಕು ಎಂಬಂತೆ ಎಲ್ಲವನ್ನು ಕೂಡಿ ಹಾಕುವ ಸಮಯ. ಮುಪ್ಪಾಯಿತು, ಅಂಟಿಕೊಂಡದ್ದೆಲ್ಲಾ ಕೊಳೆ ಎಂದರಿವಾದಾಗ, ತೊಳೆದುಕೊಳ್ಳಲು ಶಕ್ತಿಯಿರದ ಪರಿಸ್ಥಿತಿ. ತನು, ಮನಕ್ಕೆರಡಕ್ಕೂ ಮುಪ್ಪು ಹಿಡಿದು ಸುಕ್ಕುಗಟ್ಟಿರುವ ಮುಖದಲ್ಲಿ ಹಳೆಯದನ್ನೆಲ್ಲಾ ಮೆಲುಕು ಹಾಕುತ್ತಾ ಒಂಟಿ ಜೀವವಾಗುತ್ತದೆ. ತಮ್ಮಷ್ಟಕ್ಕೆ ಒಂಟಿಯಾಗಿ ಕುಳಿತು ಆಲೋಚಿಸಲು ಸಾಕಷ್ಟು ಸಮಯ...ಆದರೆ ಆಲೋಚಿಸಿ ಪ್ರಯೋಜನ? ಕಾಲ ಮುಗಿಯಿತು..ಹೋಗುತ್ತೇನೆಯೆಂದು ಹೊರಡುವುದು. ಇದೇ ಸುತ್ತಲು ಕಾಣುತ್ತಿರುವ ಚಿತ್ರಣ.

ಚಿಕ್ಕ ಮಕ್ಕಳನ್ನು ನೋಡಿದರೆ, ಏನೂ ಅರಿಯದ ಮುಗ್ದತೆ...
ಹರಯದವರ ಕಂಡರೆ, ಜೀವನವ ಸವಿಯುವ ಆಸೆ, ಕನಸು...
ಹಿರಿಯರಲ್ಲಿ, ಅನುಭವದ ಪ್ರತಿಬಿಂಬ...
ಒಂದಕ್ಕೊಂದು ಅಂಟದಂತೆ, ಅರಿವಿಲ್ಲದಂತೆ ನಡೆದು ಹೋಗುತ್ತದೆ....

ಏಕೆ ಹೀಗೆ...ಎಲ್ಲಿಂದ ಬಂದೆವು? ಎಲ್ಲಿದ್ದೇವೆ? ಎಲ್ಲಿಗೆ ಹೋಗುತ್ತೇವೆ? ಚಿಕ್ಕಂದಿನಿಂದ ಕಾಡಿದ ಪ್ರಶ್ನೆಗಳು... ಆಗ, ಒಂದೆರಡು ನಿಮಿಷ ಬೆಚ್ಚಿಬಿದ್ದಂತಾಗಿ ’ಇದು ಅರಿವಾಗದ ವಿಷಯ’ ಎಂದು ಬಿಟ್ಟೆ. ಈಗ, ಅರಿಯಲು ಯತ್ನಿಸುತ್ತೇನೆ...ಆದರೆ ’ಹೌದು, ಇದು ಸರಿ’ ಎಂದು ಹೇಳುವವರಾರು?

’ಒಂಟಿಯಾಗಿ ಬಂದೆವು, ಒಂಟಿಯಾಗೇ ಹೋಗುತ್ತೇವೆ’, ನಿಜ, ಆದರೆ...ಒಂಟಿ ಬದುಕು ಆರಂಭವಾದರೆ, ಸುತ್ತಲೂ ಇರುವ ಕಲ್ಲು ಬಂಡೆಗಳಿಗೂ, ಸಂತೋಷವನ್ನೂ,ನೋವನ್ನೂ ಹಂಚಲಾಗದ ಜೀವವಿರುವಂತೆ ಕಾಣುವ ಮರ ಗಿಡಗಳಿಗೂ ಯಾವ ಬೇಧವಿಲ್ಲ.

ಆದರೆ...ಈ ರೀತಿ ಆಲೋಚನೆ ಮಾಡುವ ಗುಣವಿದ್ದು, ಮಾನವರು ಎಂದೆನಿಸಿಕೊಂಡ ನಾವು ಒಂಟಿಯಾಗಿ ಸಾಗಿಹೋಗುವುದು ನಿಜವಾದರೂ..ನಮ್ಮ ಬರುವಿಕೆಗೇ ಹಲವರು ನಮ್ಮ ದಾರಿ ಹಿಡಿದು ಕಾದರೆ....ಆಲೋಚಿಸಿ....!!! ಅಂಥ ಏನೆಲ್ಲಾ ಕೆಲಸಗಳು ನಮ್ಮಿಂದ ಸಾಧ್ಯ???

5 comments:

Prashanth said...

ಸುಮನ, ಬಹಳ ದಿನಗಳ ನಂತರ ನಿಮ್ಮ ಬರವಣಿಗೆ ಓದುವ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ವಂದನೆಗಳು.

ನಿಮಗೆ ಕಾಡುತ್ತಿರುವ ಪ್ರಶ್ನೆ, ಪ್ರತಿಯೊಬ್ಬ ಮನುಷ್ಯನಿಗೂ ಕಾಡದೇ ಇರಲಾರದು. ಆದರೆ, ಎಲ್ಲರೂ ನಿಮ್ಮಂತೆ ಮನನ ಮಾಡುವ ಶಕ್ತಿಯನ್ನು ಹೊಂದಿರುವುದಿಲ್ಲವೇನೋ??

ಉತ್ತಮ ಚಿಂತನೆ ಮತ್ತು ಬರವಣಿಗೆ. ಹೀಗೆಯೇ ಬರೆಯುತ್ತಿರಿ :o)

Sindhu priya said...

woww........

Awesome oil paint summi..

Anonymous said...

Wow! I started thinking about what you wrote, but your painting just blew me away. Fantastic piece!!

The painting conveys ಒಂಟಿತನ really well.

-Chidu

Sumana said...

Thanks everybody... :)

Badarinath Palavalli said...

ಒಳ್ಳೆಯ ಬ್ಲಾಗ್ ರೂಪಿಸಿದ್ದೀರಿ. ತುಂಬಾ ಒಳ್ಳೆಯ ಲೇಖನ.


ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
www.badari-poems.blogspot.com
www.badari-notes.blogspot.com
www.badaripoems.wordpress.com

Face book Profile : Badarinath Palavalli